ಕಲ್ಗುಂಡಿಕೊಪ್ಪದಲ್ಲಿ ಜನಮನಗೆದ್ದ ಸಂಗೀತ ಸಂಜೆ

by

ಶಿರಸಿ: ತಾಲೂಕಿನ ಕಲ್ಗುಂಡಿಕೊಪ್ಪದಲ್ಲಿ ನೂತನ ಮನೆ ಶ್ರೀಪಾದ ಕೃಪಾ ಗೃಹದ ನವಗಾರ ಪ್ರವೇಶದ ಅಂಗವಾಗಿ ರಾತ್ರಿಯಿಡೀ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು. ಮೂಲತಃ ಅನಾದಿ ಕಾಲದಿಂದಲೂ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡುತ್ತ ಬಂದಿರುವ ಹಾಗೂ ರಾಜ್ಯದ ಮತ್ತು ಹೊರ ರಾಜ್ಯದ ಅದೆಷ್ಟೋ ಹಿರಿಯ ಸಂಗೀತ ಕಲಾವಿದರು ಬಂದು ಹೋಗುತ್ತಿರುವ ಮನೆ ಕಲ್ಗುಂಡಿಕೊಪ್ಪದ ಶ್ರೀಪಾದ ಕೃಪಾಗೃಹವಾಗಿದೆ. ಆದ್ದರಿಂದಲೇ ಸುತ್ತಮುತ್ತಲ ಊರನಾಗರಿಕರಿಗೆ, ಬಂಧು ಹಿತೈಷಿಗಳಿಗೆ ಸಂಗೀತದ ರಸದೌತಣ ನೀಡುವ ಸಲುವಾಗಿ ಸಂಗೀತ ಸಂಜೆ ಏರ್ಪಡಿಸಿ ನವಗಾರ ಪ್ರವೇಶಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಯಶಸ್ವೀಯಾಗಿದೆ.

ಸಂಗೀತ ಸಂಜೆಯನ್ನು ಊರಿನ ಹಿರಿಯಳೂ ಆದ ಶ್ರೀಮತಿ ವಿಶಾಲಾಕ್ಷೀ ಶ್ರೀಪಾದ ರಾವ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಉದ್ಯಮಿ ಶ್ರೀನಿವಾಸ ಹೆಬ್ಬಾರ, ಕೆ.ಪಿ.ಸಿ.ಎಲ್. ನಿರ್ದೇಶಕ ದೀಪಕ ದೊಡ್ಡೂರ್, ನ್ಯಾಯವಾದಿ ಅರುಣಾಚಲ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಆರಂಭಿಕ ಹಿಂದೂಸ್ಥಾನಿ ಕಾರ್ಯಕ್ರಮವಾಗಿ ಶ್ರೀಮತಿ ಥಿಟೆ ಬಿಜಾಪುರ ಅವರು ಕೆಲವೊಂದು ರಾಗಗಳನ್ನು ಪ್ರಸ್ತುತ ಪಡಿಸುತ್ತ ಕೊನೆಯಲ್ಲಿ ತರಾನಾವನ್ನು ಪ್ರಸ್ತುತಗೊಳಿಸಿದರು. ನಂತರದಲ್ಲಿ ರವೀಂದ್ರ ಹೆಗಡೆ ಇಳಿಮನೆ ಬೆಂಗಳೂರು ಇವರು ಸಂಗೀತ ಕಛೇರಿ ನಡೆಸಿಕೊಟ್ಟರು. ಇಬ್ಬರು ಗಾಯಕರುಗಳಿಗೆ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ತಬಲಾದಲ್ಲಿ ಶೇಷಾದ್ರಿ ಅಯ್ಯಂಗಾರ್ ಹೊನ್ನಾವರ ರವರು ಸಾಥ್ ನೀಡಿದರೆ ತಬಲಾದಲ್ಲಿ ಆರಾಧನಾ ಹೆಗಡೆ ಸಹಕರಿಸಿದರು.

ನಂತರದಲ್ಲಿ ನಡೆದ ಸೀತಾರವಾದನದಲ್ಲಿ ಖ್ಯಾತ ಸೀತಾರ ವಾದಕ ಬೆಂಗಳೂರಿನ ಸಂಜೀವ ಕೊರ್ಟಿ ತಮ್ಮ ಸೀತಾರ ಕಛೇರಿ ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ತಬಲಾದಲ್ಲಿ ಮುತ್ತು ಕುಮಾರ ಬೆಂಗಳೂರು ಸಹಕರಿಸಿದರು.

ತದನಂತರದಲ್ಲಿ ಆರಂಭಗೊಂಡಿದ್ದೆ ಸಂಗೀತ ಸಂಜೆಯ ವಿಶೇಷ ಕಾರ್ಯಕ್ರಮ ವಿವಿಧ ವಾದನಗಳ ಜುಗಲ್ಬಂಧಿ, ತ್ರಿಗಲ್ ಬಂಧಿ ಹೀಗೆ ವೈವಿಧ್ಯಮಯವಾಗಿ ಸಮ್ಮಿಶ್ರಗೊಂಡು ಕಿಕ್ಕಿರಿದ ಪ್ರೇಕ್ಷಕರಿಗೆ ರಸದೌತಣ ನೀಡಿದೆ.
ವಾದನಗಳ ಸಮ್ಮಿಶ್ರದಲ್ಲಿ ಬಟ್ಟೊ ಆರುವಾದನಗಳ ವಿವಿಧ ಬಗೆಯಲ್ಲಿ ನ್ುಡಿಸಲ್ಪಟ್ಟಿತು. ಸಂತೂರ್ ವಾದನದಲ್ಲಿ ಬೆಂಗಳೂರಿನ ಅಶ್ವಿನ್ ವಾಲ್ವಾಲ್‍ಕರ್, ಕೊಳಲಿನಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾದಲ್ಲಿ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ ಸೀತಾರವಾದನದಲ್ಲಿ ಸಂಜೀವ ಕೋರ್ಟಿ, ಮತ್ತು ಜಿಲ್ಲೆಗೆ ಪ್ರಪ್ರಥಮವಾದನ ಪ್ರದರ್ಶನವಾದ ಡರ್ಬುಕಾವೆಂಬ ವಿಶೇಷ ವಾದನದಲ್ಲಿ ಮುತ್ತು ಕುಮಾರ ಬೆಂಗಳೂರುರವರು, ಅವರವರ ವಾದನ ನ್Àಡಿಕೆಯಲ್ಲಿ ಹೊಸ ಲೋಕವನ್ನೇ ಸೃಷ್ಠಿಸಿದ್ದಾರೆನ್ನಬಹುದು.

ಡರ್ಬುಕಾ ಎಂಬ ವಿಶೇಷ ವಾದನ ಮೂಲತಃ ಟರ್ಕಿ ದೇಶದ್ದೆಂದು ಹೇಳಲಾಗಿದ್ದು ಅದರ ನುಡಿಕೆಯಲ್ಲಿ ಇನ್ನಿತರ ವಾದನಗಳ ಸ್ವರದೊಂದಿಗೆ ಹೊಂದಿದ ರಾಗ ತಾಳಲಯಗಳನ್ನು ಸಮ್ಮಿಶ್ರಗೊಳಿಸುವ ಕಲಾಪ್ರದರ್ಶನ ನಿಜಕ್ಕೂ ಹೆಮ್ಮೆ ಎನಿಸುತ್ತದೆ.

ಕಲ್ಗುಂಡಿಕೊಪ್ಪದ ವಿಜಯಕುಮಾರ ರಾವ್ ರವರು. ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

–    ಗಿರಿಧರ ಕಬ್ನಳ್ಳಿ