ನೈಸರ್ಗಿಕವಾಗಿ ಬೆಳೆದ ಮುತ್ತು ಕೃಷಿ ಅನಂತಕುಮಾರ ಹೆಗಡೆಯವರಿಂದ ಉದ್ಘಾಟನೆ

byಶಿರಸಿ ತಾಲೂಕಿನ ಕಕ್ಕಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ನೈಸರ್ಗಿಕವಾಗಿ ಬೆಳೆದ ಮುತ್ತು ಕೃಷಿಯನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಮಾನ್ಯ ಸಂಸದರು ಕಳೆದ 3 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮುತ್ತು ಕೃಷಿಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಆಯ್ದ ಕೃಷಿಕರನ್ನು ಬೆಂಗಳೂರಿಗೆ ತರಬೇತಿಗಾಗಿ ಕಳುಹಿಸಿಕೊಡಲಾಗಿತ್ತು. ಕೃಷಿ ಮಾಡಿದ ರೈತರಿಗೆ ಪ್ರೋತ್ಸಾಹ ಧನವನ್ನು ಕೊಡಿಸಿ ನೈಸರ್ಗಿಕವಾಗಿ ಮುತ್ತು ಬೆಳೆಯಲು ಉತ್ತೇಜನ ನೀಡಲಾಗಿತ್ತು. ಮಲೆನಾಡಿನ ಜನರಿಗೆ ಬದುಕನ್ನು ನೀಡಬಹುದಾದ ಕಲ್ಪನೆಯೊಂದಿಗೆ ಮೊದಲು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಾಗೂ ಅನುಭವದ ಕೊರತೆಯಿಂದಾಗಿ ಅದು ಅಷ್ಟೊಂದು ಯಶಸ್ವಿಯಾಗಿಲ್ಲ.
ಶ್ರೀಮತಿ ನಂದಜಾ ಹೆಗಡೆಯವರು ಛಲ ಬಿಡದೇ ತಾವು ಪಡೆದು ಬಂದ ತರಬೇತಿ ಹಾಗೂ ತಮ್ಮದೇ ಆದ ಅನುಭವದಿಂದಾಗಿ  ಯಶಸ್ವಿಯಾಗಿ ಮುತ್ತು ಕೃಷಿಯನ್ನು ಬೆಳೆದು ಇತಿಹಾಸ ನಿರ್ಮಿಸಿರುತ್ತಾರೆಂದು ಸಂಸದರು ಬಣ್ಣಿಸಿರುತ್ತಾರೆ.

ಇದೊಂದು ಹೊಸ ಬೆಳವಣಿಗೆಯಾಗಿದ್ದು ಇದು ರೈತರಿಗೆ ಆತ್ಮವಿಶ್ವಾಸವನ್ನು ತುಂಬುವಲ್ಲಿ ಪರಿಣಾಮಕಾರಿಯಾಗಿದೆ. ಮೊದಲ ಹಂತದ ಗೆಲುವಿಗಾಗಿ ತುಂಬಾ ದಿನ ಕಾದಿದ್ದೇವೆ. ರೈತರ ಅನುಭವ ಹಾಗೂ ತಾಳ್ಮೆ ಯಶಸ್ವಿ ಪಥದತ್ತ ಕೊಂಡೊಯುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಮುಂದಿನ ದಿನಗಳಲ್ಲಿ ಕೇರಳ ಹಾಗೂ ಒರಿಸ್ಸಾದಿಂದ ತಜ್ಞರ ತಂಡವನ್ನು ಜಿಲ್ಲೆಗೆ ಕರೆತಂದು ಇನ್ನೂ ಹೆಚ್ಚಿನ ಜನರಿಗೆ ಮುತ್ತು ಕೃಷಿಯನ್ನು ಪರಿಚಯಿಸಿ ಮುತ್ತು ಕೃಷಿಯನ್ನು ಲಾಭದಾಯಕ ಉದ್ದಮೆ ಯನ್ನಾಗಿ ಮಾರ್ಪಾಡಲು ಅಗತ್ಯ ಶ್ರಮ ವಹಿಸಿರುವುದಾಗಿ ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಖಾನಾಪುರದ ಮಾಜಿ ಶಾಸಕರಾದ ಶ್ರೀ ಪ್ರಲ್ಹಾದ ರೆಹಮಾನಿ, ಮೀನುಗಾರಿಕೆ ಇಲಾಖೆಯ ಉಪ-ನಿರ್ದೆಶಕರಾದ ಶ್ರೀ ವೆಂಕಟರಮಣ ಹೆಗಡೆ, ಶಿರಸಿ ಮೀನುಗಾರಿಕಾ ಸಹಾಯಕ ನಿರ್ದೆಶಕರಾದ ಶ್ರೀ ವೈಭವ, ಶ್ರೀ ಪ್ರದೀಪ ಹೆಗಡೆ, ಕದಂಬ ಸಂಸ್ಥೆಯ ಶ್ರೀ ಗೋಪಾಲ ದೇವಾಡಿಗ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ದತ್ತಾತ್ರೆಯ ವೈದ್ಯ ಮುಂತಾದವರು ಉಪಸ್ಥಿತರಿದ್ದರು.