ರಾಮ್ ಗೋಪಾಲ್ ವರ್ಮಾ ವಿರುದ್ಧ ‘ರಣರಾಗಿಣಿ’ಯಿಂದ ದೂರು ದಾಖಲು

by

ಸದಾ ವಿವಾದಿತ ಹೇಳಿಕೆಗಳಿಂದ ಚರ್ಚೆಯಲ್ಲಿರುವ ರಾಮ್ ಗೋಪಾಲ್ ವರ್ಮಾ ಇವರು ಜಾಗತಿಕ ಮಹಿಳಾ ದಿನದಂದೇ ವಿಕೃತ ಟ್ವೀಟ್ ಮಾಡಿ ಮಹಿಳೆಯರ ಘೋರ ಅವಮಾನ ಮಾಡಿದ್ದಾರೆ. ‘ಸನಿ ಲಿಯೋನ್ ಪುರುಷರಿಗೆ ಎಷ್ಟು ಸುಖ ನೀಡುತ್ತಾಳೆಯೋ, ಅಷ್ಟೇ ಸುಖ ಎಲ್ಲ ಮಹಿಳೆಯರು ಪುರುಷರಿಗೆ ನೀಡಬೇಕು, ಎಂದು ಬಹಿರಂಗವಾಗಿಯೇ ಮಹಿಳೆಯರಿಗೆ ಅಸಂಬದ್ಧ ಶುಭಾಶಯವನ್ನು ನೀಡುತ್ತಾ, ಅವರ ಮಾನಸಿಕತೆ ಎಷ್ಟು ಕೀಳ್ಮಟ್ಟದ್ದಾಗಿದೆ ಎಂಬುದನ್ನು ತೋರಿಸಿದ್ದಾರೆ. ಈ ಹೇಳಿಕೆಯಿಂದ ಸಮಸ್ತ ಮಹಿಳೆಯರ ಅವಮಾನ ಮಾಡಿದ ಬಗ್ಗೆ ಹಿಂದೂ ಜನಜಾಗೃತಿ ಸಮತಿಯ ಮಹಿಳಾ ಶಾಖೆ ರಣರಾಗಿಣಿಯ ವಿಶಾಖಾ ಮ್ಹಾಂಬರೆ ಇವರು ಗೋವಾದ ಮ್ಹಾಪ್ಸಾ ಪೊಲೀಸ್ ಠಾಣೆಯಲ್ಲಿ ರಾಮ್ ಗೋಪಾಲ್ ವರ್ಮಾ ಇವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮಹಿಳೆಯರು ಉಪಸ್ಥಿತರಿದ್ದರು. ರಾಮ್ ಗೋಪಾಲ್ ವರ್ಮಾ ಇವರು ತಕ್ಷಣವೇ ಅವರ ಈ ಕೀಳ್ಮಟ್ಟದ ಹೇಳಿಕೆಗಾಗಿ ಎಲ್ಲ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಮ್ ಗೋಪಾಲ್ ವರ್ಮಾ ಇವರ ವಿರುದ್ಧ ರಣರಾಗಿಣಿಯು ಹೋರಾಟಕ್ಕಿಳಿಯುವುದು. ಎಂದು ರಣರಾಗಿಣಿಯ ಮಹಾರಾಷ್ಟ್ರ ರಾಜ್ಯ ಸಂಘಟಕಿ ಕು. ಪ್ರತೀಕ್ಷಾ ಕೋರಗಾವಕರ್ ಇವರು ಎಚ್ಚರಿಕೆ ನೀಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಇವರ ವಿಕೃತ ದೃಷ್ಟಿಗೆ ಮಹಿಳೆಯರಲ್ಲಿ ಕೇವಲ ಸನಿ ಲಿಯೋನ್ ಕಾಣಿಸುತ್ತಿದ್ದಾರೆ; ಆದರೆ ಅದೇ ಮಹಿಳೆ ರಣಚಂಡಿಯ ರೂಪ ಧರಿಸಬಹುದು, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮನೂ ಆಗಬಹುದು, ಎಂಬುದನ್ನು ತೋರಿಸುವ ಸಮಯ ಬಂದಿದೆ. ರಾಮ್ ಗೋಪಾಲ್ ವರ್ಮಾ ಮನುಕುಲಕ್ಕೆ ಒಂದು ವಿಕೃತವಾಗಿದ್ದಾರೆ. ಇಡೀ ಚಿತ್ರರಂಗದವರು ರಾಮ್ ಗೋಪಾಲ್ ವರ್ಮಾ ಇವರನ್ನು ಬಹಿಷ್ಕರಿಸಬೇಕು ಹಾಗೂ ಈ ವಿಕೃತ ನಿರ್ಮಾಪಕನಿಗೆ ಪಾಠ ಕಲಿಸಲು ಹಾಗೂ ಮಹಿಳೆಯರ ಗೌರವಕ್ಕಾಗಿ ರಾಮ್ ಗೋಪಾಲ್ ವರ್ಮಾ ಇವರ ಚಲನಚಿತ್ರಗಳ ಮೇಲೆ ಬಹಿಷ್ಕಾರ ಹಾಕಬೇಕು, ಎಂದು ರಣರಾಗಿಣಿ ಶಾಖೆಯ ವತಿಯಿಂದ ಕರೆ ನೀಡಲಾಗಿದೆ