ಶಿರಸಿಯ ಯುವಕರಿಂದ ಸ್ಮಾರ್ಟ್ ಫೋನ್ ಜಗತ್ತಲ್ಲಿ ಕನ್ನಡ ಡಿಂಡಿಮ!

by

ಕನ್ನಡದ ಓದುಗರಿಗೆ ಸಕಾರಾತ್ಮಕ ವಿಷಯಗಳನ್ನು ತಲುಪಿಸುವ ಸದುದ್ದೇಶದೊಂದಿಗೆ ನಮ್ಮ ಶಿರಸಿಯ ಮೂಲದ ಯುವ ತಂಡವೊಂದು ‘ಡಿಂಡಿಮ’ ಎನ್ನುವ ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿ ಕನ್ನಡಾಸಕ್ತರ ನಡುವೆ ಗುರುತಿಸಲ್ಪಡುತ್ತಿದೆ.

ಶಿರಸಿಗರಾದ ಮಹಾಬಲೇಶ್ವರ್ ಭಟ್, ಮಂಜುನಾಥ್ ಭಟ್, ಹರ್ಷ ಭಟ್, ವರುಣ್ ಕುಂಭೇಶ್ವರ, ಶರತ್ ಹೆಗಡೆ, ದರ್ಶನ್, ರಂಗನಾಥ, ದಿವ್ಯಾ ಪುರಾಣಿಕ್ ಹಾಗೂ ಸ್ನೇಹಾ ಹೆಗಡೆ ಈ ತಂಡದ ಸದಸ್ಯರು.

ಕೇವಲ ಧನಾತ್ಮಕ ಹಾಗೂ ಆಸಕ್ತಿದಾಯಕ ವಿಷಯಗಳನ್ನಷ್ಟೇ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ  ‘ಡಿಂಡಿಮ’ ಪ್ರತಿ ದಿನವೂ ಬೇರೆ ಬೇರೆ ಮೂಲಗಳಿಂದ ಅಂತಹ ವಿಷಯಗಳನ್ನು ಆಯ್ದು ಸಂಸ್ಕರಿಸಿ ಪ್ರಕಟಿಸುವುದರ ಜೊತೆಗೆ ಯುವ ಚುಟುಕು ಹಾಗೂ ಬ್ಲಾಗ್ ಬರಹಗಾರರಿಗೂ ವೇದಿಕೆಯಾಗುವ ಆಶಯವನ್ನು ಹೊಂದಿದೆ. ಪ್ರತಿಯೊಂದು ಆಯ್ದ ವಿಷಯವನ್ನೂ ೭೦ ಪದಗಳಿಗೆ ಮೀರದಂತೆ ಚುಟುಕಾಗಿಸಿ ಪ್ರಕಟಿಸುವುದರಿಂದ ಓದುಗರು ತಮ್ಮ ಆಸಕ್ತಿಗನುಗುಣವಾಗಿ ಆರಿಸಿಕೊಂಡು ಆ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಲೇ ಒದಗಿಸಲಾದ ಸಂಬಂಧ ಪಟ್ಟ ಅಂತರ್ಜಾಲದ ಕೊಂಡಿಯನ್ನು (Web-Link) ಕ್ಲಿಕ್ಕಿಸಬಹುದು.

ಈಗಾಗಲೇ 5,000 ಕ್ಕೂ ಮಿಗಿಲಾದ ಡೌನ್ಲೋಡ್ಸ್ ಕಂಡಿರುವ ‘ಡಿಂಡಿಮ’ ದ ಪ್ರಯತ್ನವನ್ನು ಗುರುತಿಸಿ ಪ್ರತಿಷ್ಠಿತ ರೇಡಿಯೋ ವಾಹಿನಿಯಾದ ‘ರೇಡಿಯೋ ಸಿಟಿ’ ನವೆಂಬರ್ ತಿಂಗಳಲ್ಲಿ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಿದೆ . ಅಂತೆಯೇ ಆಂಗ್ಲ ಸುದ್ದಿ ಪತ್ರಿಕೆಯಾದ ‘ದಿ ಹಿಂದು’ ಆದಿಯಾಗಿ ಅನೇಕ ಕನ್ನಡ ಪತ್ರಿಕೆಗಳು ಸಹ ‘ಡಿಂಡಿಮ’ದ ಪ್ರಯತ್ನವನ್ನು ಉಲ್ಲೇಖಿಸಿ ಪ್ರೋತ್ಸಾಹಿಸಿವೆ.

‘ಡಿಂಡಿಮ’ ದ ಈ ಕನ್ನಡ ಪರ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸಹ ಇರಲಿ. ನಿಮ್ಮ ಬಿಡುವಿನ ವೇಳೆಯ ಸದುಪಯೋಗಕ್ಕಾಗಿ ‘ಡಿಂಡಿಮ’ವನ್ನು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ಲೋಡ್ ಮಾಡಿ, ಓದಿ, ಈ ತಂಡವನ್ನು ಉತ್ತೇಜಿಸಿ.

Website: DimDima