​ನಿಷೇದಿತ ನೋಟು ಅಕ್ರಮ ಸಾಗಾಣೆ: ಮೂವರು ಮಹಿಳೆಯರು ಪೋಲಿಸ್ ವಶಕ್ಕೆ

by

ಕಾರವಾರ : ಗೋವಾ ದಿಂದ ಮುಂಡಗೋಡ ಗೆ ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟನ್ನು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.
ಚಿತ್ತಾಕುಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ ಬಳಿ ಸಾಗರಕವಚ ಅಣಕು ಕಾರ್ಯಾಚರಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ.

ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇದಿತ ಭಾರಿ ಮೌಲ್ಯದ ನೋಟು ಇದಾಗಿದೆ ಎಂದು ತಿಳಿದುಬಂದಿದೆ.
ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, ಮೀನಾಕ್ಷಿ ನಾಯಕ ಬಂದಿತ ಮಹಿಳೆಯರಾಗಿದ್ದು
ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.