ಶಿರಸಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸ್ವಚ್ಛತಾ ಕಾರ್ಯ

by

ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲನ್ನು ಯಂತ್ರದ ಮೂಲಕ ಕತ್ತರಿಸುವ ಕೆಲಸ ತ್ವರಿತಗತಿಯಲ್ಲಿ ಸಾಗಿದೆ.
ಶಿರಸಿಯ ಚೌಕಿಮಠದಲ್ಲಿರುವ “ಶಿರಸಿ ಸಿರಿ” ಆಫೀಸ್ ಎದುರು ಬೆಳಿಗ್ಗೆ 7.30 ರ
ಸುಮಾರಿಗೆ ಹುಲ್ಲು ಕತ್ತರಿಸುತ್ತಿರುವ ದ್ರಶ್ಯವನ್ನು ನಾವಿಲ್ಲಿ ಕಾಣಬಹುದು.
ಚೌತಿಹಬ್ಬ ಹತ್ತಿರವಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯವೂ ಚುರುಕಿನ ಗತಿಯಲ್ಲಿ ಸಾಗಿದ್ದು ಸಮಾಧಾನಕರ ಬೆಳವಣಿಗೆಯಾಗಿದೆ.
ಮಳೆಗಾಲಕ್ಕೆ ಇಂಟರ್ ವೆಲ್ ಬರುವ ಸಮಯದಲ್ಲಿ ಹುಲ್ಲುಗಳು, ಸಸ್ಯಗಳು ಪೊದೆಗಳಂತೆ ಬೆಳೆಯುವುದು ಸರ್ವೇಸಾಮಾನ್ಯ.
ಆದರೆ ಇವುಗಳು ಸೌಂದರ್ಯವನ್ನು ಹಾಳುಗೆಡವುದರಿಂದ ಕತ್ತರಿಸುವುದು ಅನಿವಾರ್ಯವೂ ಆಗಿರುತ್ತದೆ.
ಗಣೇಶ ಹಬ್ಬದ ಪೂರ್ವದಲ್ಲೇ ಆರಂಭವಾಗಿರುವ ಈ ಕೆಲಸ ಶಿರಸಿಯ ಇಡೀ ನಗರಕ್ಕೂ ಸೀಮಿತವಾಗಲಿ.
ಆ ವಿಘ್ನವಿನಾಶಕ ಅನುಗ್ರಹವನ್ನೂ ಕರುಣಿಸಲಿ