ಮೂಕಪ್ರಾಣಿ

by

ಶಿರಸಿಯ ಯಲ್ಲಾಪುರ ರೋಡಿನಲ್ಲಿ ಕಂಡು ಬಂದ ಹ್ರದಯ ವಿದ್ರಾವಕ ದ್ರಶ್ಯ.  ಸುಮ್ಮನೆ ಫೋಟೋದಲ್ಲಿ ನೋಡಿದಾಗ ಎರಡು ನಾಯಿಮರಿಗಳು ಮಲಗಿರುವಂತೆ ಕಾಣ್ತವೆ.
ಆದರೆ ನೋಡುವುದೆಲ್ಲ ನಿಜವಲ್ಲ…!!
ಇದು ಮನೆಯೊಡೆಯನಿಂದ ತಿರಸ್ಕಾರಕ್ಕೊಳಗಾಗಿ ಬೀದಿಯಲ್ಲಿ ಬಿದ್ದು ನರಳುತ್ತಿರುವ ಪುಟ್ಟ ಮರಿಗಳ ಆರ್ತನಾದ. ಸ್ವಜ್ನಾನವೂ ಇಲ್ಲದ ಶಿಶುಗಳ ಸಂವೇದ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ನಿಜ. ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು ನಿಜ. ಆದರೆ ಮೂಕಪ್ರಾಣಿಗಳ ಬದುಕಿನ ಆಯಾಮಗಳೇ ಬೇರೆ. ಈ ಪುಟ್ಟ ಮರಿಗಳು dumb-dogತನ್ನಮ್ಮನ ಎದೆ ಹಾಲಿನ ರುಚಿ ಅರಿವಾಗುವ ಮೊದಲೇ ಬೀದಿಗೆ ತಳ್ಳಲ್ಪಟ್ಟವರು. ಇವುಗಳದು ತಮ್ಮ ಹೊಟ್ಟೆಯನ್ನು ಹೇಗೆ ತುಂಬಿಸಿಕೊಳ್ಳಬೇಕೆಂಬ ಸಂಗತಿಯನ್ನೂ ಅರ್ಥ ಮಾಡಿಕೊಳ್ಳದಂತಹ ವಯಸ್ಸು. ಈಗ ಮನೆಯೊಡೆಯನ ನಿರ್ಲಕ್ಷ್ಯಕ್ಕೊಳಗಾಗಿ, ತನ್ನ ಹೆತ್ತಮ್ಮನಿಂದಲೂ ಬೇರ್ಪಟ್ಟು ಬೀದಿಗೆ ಬಂದಿವೆ.
ಶಿರಸಿಯಲ್ಲಿ ವಾಹನಗಳ ಭರಾಟೆಯಲ್ಲಿಯೂ ಈ ಮುಗ್ಧ ಜೀವಿಗಳು ಟಯರ್ ಕೆಳಗೆ ಸಿಲುಕದೇ ಬದುಕಿದೆಯೆಂದರೆ ಅದೊಂದು ಅದ್ಭುತವೇ ಸರಿ.
ಚಳಿಯಲ್ಲಿ ಮುದುಡಿ ಹಸಿವಿನ ಹಾಹಾಕಾರದಲ್ಲಿ  ಮಲಗಿದ್ದ ಈ ಮರಿಗಳನ್ನು ನೋಡಿ ನಾನು ಏನೇನು ಮಾಡಿದೆ ಎಂಬುದರ ಪ್ರಸ್ತಾಪ ಈಗ ಬೇಕಿಲ್ಲ. ಇವುಗಳು ಸೇರಬೇಕಾದ ಜಾಗಕ್ಕೆ ಸೇರಿ ಆಗಿದೆ. ಸೂಕ್ತ ರಕ್ಷಣೆಯನ್ನೂ ಕಲ್ಪಿಸಲಾಗಿದೆ.

–ವಿನಾಯಕ ಭಟ್ (ಖುಷಿವಿನು)