Educated Fools

by

ಇದೇನಿದು ತಂತ್ರಜ್ನಾನದಲ್ಲಿ Educated Fools ವಿಷಯ ಹೇಗೆ ಬಂತು ಎಂದು ವಿಚಾರಮಾಡುತ್ತಿದ್ದೀರಾ? ಹೌದು ಇದು ಮಾಹಿತಿಯುಗದಲ್ಲಿನ ವಿದ್ಯಾವಂತರೂ ಹೇಗೆ ಮುರ್ಖರಾಗುತ್ತಿದ್ದಾರೆ ಎಂಬುದೇ ಈ ಲೇಖನದ ಮುಖ್ಯಾಂಶ.

ತಂತ್ರಜ್ನಾನ ಬೆಳೆದಂತೆಲ್ಲ ನಾವು ಬುದ್ದಿವಂತರಾಗುವ ಬದಲು ಭಯಂಕರ ಅಜ್ನಾನಿಗಳಾಗುತ್ತಿದ್ದೇವೆ. ನೀವು ಈ ವಿಷಯ ನಂಬಲೇಬೇಕು. ಇತ್ತಿತ್ತಲಾಗಿ FaceBook, Twitter & WhatsApp ಬಳಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇವುಗಳು ಸಾಮಾನ್ಯವಾಗಿ ಗೆಳೆಯ, ಗೆಳತಿ ಹಾಗೂ ಪರಿಚಯಸ್ಥರೊಂದಿಗೆ ಸಂವಹನ ನಡೆಸಲು ಅದ್ಭುತ ಅವಕಾಶವನ್ನೇ ಸೃಷ್ಟಿಸಿವೆ. ಫೋಟೊ, ವಿಡಿಯೋ ಇದ್ಯಾದಿಗಳನ್ನು ವರ್ಗಾಯಿಸಿಕೊಳ್ಳುದು ಸರ್ವೇಸಾಮಾನ್ಯ. ಇದಲ್ಲದೇ ಇನ್ನೊಂದೆಡೆಯಲ್ಲಿ ವ್ಯಾಪಾರ, ಪ್ರಚಾರ ಹಾಗೂ ಹಣಗಳಿಸುವ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತಿದೆ. ef1

ಅದೆಲ್ಲ ಸರಿ ಇವಕ್ಕೂ Educated Fools ಗೂ ಏನು ಸಂಭಂಧ? ಸಂಬಂಧವಿದೆ.
ನೀವು ಗಮನಿಸಿರಬಹುದು, ಕೆಲವು ವಂಚಕರು ನಿಮ್ಮ ಮೊಬೈಲ್ ಗೆ SMS ಕಳುಹಿಸಿ “ನೀವು ಲಕ್ಷಗಟ್ಟಲೆ ಹಣ ಗೆದ್ದಿದ್ದೀರಿ. ಈ ಹಣ ಪಡೆಯಲು ಈ ಕೆಳಗಿನಂತೆ ಮಾಡಿ” ಎಂದು ಅನಾಮಧೇಯ SMS ಬಂದಿರುತ್ತದೆ. ಮೊದಲ ಪ್ರಯತ್ನವಾಗಿ ನಿಮ್ಮ ಹೆಸರು, ವಿಳಾಸ, ಇ-ಮೇಲ್ ಇತ್ಯಾದಿಗಳನ್ನು ಪಡೆದುಕೊಳ್ಳುತ್ತಾರೆ. ನಂತರದಲ್ಲಿ ಇದನ್ನು ಪಡೆಯಲು ಇಷ್ಟು ಹಣ ಕೊಡಿ ಅಷ್ಟು ಹಣ ಕೊಡಿ ಎಂದು ನಿಮ್ಮಿಂದಲೇ ಹಣ ಎಗರಾಯಿಸಿ ನಾಪತ್ತೆಯಾಗುತ್ತಾರೆ.

ಅಂತೆಯೇ FaceBook, Twitter & WhatsApp ಗಳಲ್ಲಿ ಹೊಸದೊಂದು ಟ್ರೆಂಡ್ ಆರಂಭಗೊಂಡಿದೆ. ಸುಂದರ ಯುವತಿಯ ಭಾವಚಿತ್ರವುಳ್ಳವಳಿಂದ ಒಂದು Message ಬರುತ್ತದೆ. ಅದರಲ್ಲಿ “ನಾನು ನಿಮ್ಮ ಪ್ರೊಫೈಲ್ ನೋಡಿ ಆಕರ್ಶಿತಳಾಗಿದ್ದೇನೆ, ನಿಮ್ಮೊಂದಿಗೆ ಹರಟಲು ಬಯಸಿದ್ದೇನೆ. ಈ ನನ್ನ ಇ-ಮೇಲ್ ವಿಳಾಸಕ್ಕೆ ಇ-ಮೇಲ್ ಮಾಡಿ ನನ್ನನ್ನು ಸಂಪರ್ಕಿಸಿ” ಎಂಬಂತಿರುವ ಸಂದೇಶ ಬರುತ್ತದೆ. ಪಡ್ಡೆಹುಡುಗರು ತಕ್ಷಣವೇ ಸಂಪರ್ಕಿಸುತ್ತಾರೆ. ಆಮೇಲೇನು ನಾನು ಹಾಗೆ ಹೀಗೆ ಎಂದು ಏನೇನೊ ತಲೆ ತಿಂದು ಹಣ ಎಗರಾಯಿಸುತ್ತಿದ್ದಾರೆ.

FaceBook & WhatsApp ಗಳಲ್ಲಿ ಸ್ವಲ್ಪ ವಿಚಿತ್ರ ಎನ್ನುವಂತಹ Message ಗಳು ಓಡಾಡುತ್ತಿವೆ. “ಈ Message ನ್ನು ೫ ಗ್ರೂಪ್‌ಗಳಲ್ಲಿ ಶೇರ್ ಮಾಡಿ. ಹೀಗೆ ಮಾಡುವದರಿಂದ ಚಿತ್ರದಲ್ಲಿರುವ ವಸ್ತುವಿನ ಬಣ್ಣ ಬದಲಾಗುತ್ತದೆ, ಈ ಚಿತ್ರವನ್ನು (ಸಚಿತ್ರ ವರದಿಗಾಗಿ ಕೊಂಡಿ ಬಳಸಿ) ಗೆಳೆಯರೊಂದಿಗೆ ಹಂಚಿಕೊಳ್ಳಿ ಮ್ಯಾಜಿಕ್ ನೋಡಿ. ಈ Message ನ್ನು ೩ ಜನರಿಗೆ ಕಳುಹಿಸದೇ ಹೊದಲ್ಲಿ ನಿಮ್ಮ WhatsApp ನ Account ಸ್ಥಗಿತಗೊಳ್ಳುತ್ತದೆ. ಹೀಗೆ ಒಂದೋ ಎರಡೋ ದಿನವೊಂದಕ್ಕೆ ಹತ್ತಾರು Message ಗಳು ಹರಿದಾಡುತ್ತಿದೆ. ಇವುಗಳನ್ನು ಹರಿದಾಡಿಸುವವರು ಯಾವುದೋ ಹಳ್ಳಿಯ ಅಶಿಕ್ಷಿತ ಜನರಲ್ಲ. ಬದಲಾಗಿ ಕಲಿತು ಬುದ್ದಿವಂತರಾಗಿರುವ, ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವ ನಮ್ಮ ಯುವಜನರೇ. ef2

ಎಚ್ಚರ ಈ ರೀತಿಯಲ್ಲಿ ಜನರನ್ನು ಮೋಸಗೊಳಿಸುವ ದೊಡ್ಡ ಗುಂಪೇ ಇದೆ. ಇದರಿಂದ ಅವರಿಗೇನು ಲಾಭ ಎನ್ನುವುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ನಮಗೇನು ಲಾಸ್ಸಿಲ್ಲ ಬಿಡಿ ಎಂದು ಮೂಗು ಮುರಿಯುವ ಬದಲು, ತಂತ್ರಜ್ನಾನವನ್ನು ಸರಿಯಾಗಿ, ಉಪಯುಕ್ತವಾಗಿ, ಬುದ್ದಿವಂತರಾಗಿ ಬಳಸಿ.

ef3ef4ef5

ef6ef7

ef8

Ajay Bhat
This Article published on Sirsi Siri Paper
Here is the pictured prof of article