Gmail Hacked Change Your Password

by

ಹೆಚ್ಚೂಕಡಿಮೆ ೪.೯೩ (4.93) ಮಿಲಿಯನ್ ಜಿಮೇಲ್ ನ ಪಾಸ್ವರ್ಡ್ (Gmail Username & Password) Russian Bitcoin Forum (ಅಂತರ್ಜಾಲ ತಾಣ) ನಲ್ಲಿ ಬಿತ್ತರಗೊಂಡಿವೆ ಎಂಬ ಸುದ್ದಿ ಜಗತ್ತಿನಾದ್ಯಂತ ಎಲ್ಲರನ್ನೂ ದಿಗ್ಬೃಮೆಗೊಳಿಸಿದೆ. ಜಗತ್ತಿನಾದ್ಯಂತ ೪.೯೩ ಮಿಲಿಯನ್ ಜಿಮೇಲ್ ಬಳಕೆದಾರರ ಪಾಸ್ವರ್ಡ್ ಸೋರಿಕೆಯಾಗಿದೆ ಎಂದರೆ ಇದೇನು ಸಣ್ಣ ಸುದ್ದಿಯಲ್ಲ. ಈ ರೀತಿ ಬಿತ್ತರಗೊಂಡಿರುವದರಲ್ಲಿ ನಮ್ಮನಿಮ್ಮ ಗುಪ್ತಸಂಖ್ಯೆಯೂ ಇರಬಹುದು.
ಗೂಗಲ್ ಪ್ರಕಟಣೆ ಪ್ರಕಾರ ೪.೯೩ ಮಿಲಿಯನ್ ಜಿಮೇಲ್ ನ ಪಾಸ್ವರ್ಡ್ (ಗುಪ್ತಸಂಖ್ಯೆಗಳು) ಬಿತ್ತರಗೊಂದಿರುವುದರ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿದೆ. ಭಯ ಬೇಡ ಗೂಗಲ್ (Google) ಈಗಾಗಲೇ ಈ ಸುದ್ದಿಯನ್ನು ತಿರಸ್ಕರಿಸಿದೆ. ಗೂಗಲ್ ತನ್ನ ಬಳಕೆದಾರರ ಸುರಕ್ಷತೆಗೆ ಮೊದಲ ಆಧ್ಯತೆ ನೀಡಿದ್ದು, ಈ ವಿಷಯದಲ್ಲಿ ಯಾವದೇ ಹೊಂದಾಣಿಕೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

Russian Bitcoin Forum ನಲ್ಲಿ ಬಿತ್ತರಗೊಂಡಿದೆ ಎನ್ನಲಾದ ಸುದ್ದಿಗೆ ಯಾವುದೇ ಆಧಾರವಿಲ್ಲ. ಇದು ಕೇವಲ ಕಂಪ್ಯೂಟರಿಕೃತ ವ್ಯವಸ್ಥೆಯ ಹೊಂದಾಣಿಕೆಯಾಗಿದ್ದು, ಈ ರೀತಿಯ ಸೋರಿಕೆಯನ್ನು ನಿರ್ಬಂಧಿಸಲು ನಮ್ಮಲ್ಲಿ ಸಾಕಷ್ಟು ಉತ್ತಮ ವ್ಯವಸ್ಥೆ ಇದೆ ಎಂಬುದಾಗಿ ಗೂಗಲ್ ನ ವಕ್ತಾರರು TNW ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಂಪ್ಯೂಟರೀಕೃತ ವ್ಯವಸ್ಥೆಯ ಹೊಂದಾಣಿಕೆ ಹೀಗೆಂದರೇನು?
ಅಂತರ್ಜಾಲ ಬಳಕೆದಾರರು ಸರ್ವೇಸಾಮಾನ್ಯವಾಗಿ ಎಲ್ಲ ಅಂತರ್ಜಾಲ ತಾಣಗಳಿಗೂ ಒಂದೇ ಸಂಕೇತಾಕ್ಷರವನ್ನು ಬಳಸಿರುತ್ತಾರೆ. ಅಂದರೆ ಜಿಮೇಲ್ ಗೆ ಬಳಸಿರುವ ಪಾಸ್ವರ್ಡ್ ನ್ನೇ Facebook, Twitter & Blogs ಇದ್ಯಾದಿಗಳಿಗೆ ಬಳಸಿರುತ್ತಾರೆ. ಈ ಪ್ರಕ್ರಿಯೆಯಿಂದ ಪಾಸ್ವರ್ಡ್‌ನ್ನು ನೆನಪಿನಲ್ಲಿಡುವುದು ಸುಲಭ ಎಂಬುದು ಕೆಲವರ ಅಂಬೋಣ.
ಇವೆಲ್ಲವೇನೊ ಸರಿ ಆದರೂ ಕೆಲವು ಅಂತರ್ಜಾಲತಾಣಗಳು, ಮುಖ್ಯವಾಗಿ ವಂಚನೆ ಮಾಡುವ ಅಂತರ್ಜಾಲತಾಣಗಳಿಗೂ (Phishing Sites) ಈ ರೀತಿಯಲ್ಲಿ ಒಂದೇ ಪಾಸ್ವರ್ಡ ಬಳಸಿರುತ್ತಾರೆ. ಸರಳೀಕರಿಸಿ ಹೇಳಬೇಕೆಂದರೆ ಯಾವ್ಯಾವ ಅಂತರ್ಜಾಲತಾಣಗಳು ಲೊಗಿನ್ (Login) ಕೇಳುತ್ತವೆಯೋ ಅವೆಲ್ಲ ತಾಣಗಳಿಗೂ ಒಂದೇ ಪಾಸ್ವರ್ಡ ಬಳಸುವುದು. (Phishing Sites ಗಳನ್ನು ವಿಂಗಂಡಿಸುವುದು ಕಷ್ಟಸಾಧ್ಯವಾದುದರಿಂದ, ಅವುಗಳನ್ನು ಇಲ್ಲಿ ನಮೂದಿಸಿಲ್ಲ).

ಗೂಗಲ್ ಹೇಳುವಂತೆ Russian Bitcoin Forum ನಲ್ಲಿ ಬಿತ್ತರಗೊಂಡಿದೆ ಎನ್ನಲಾದ ಪಾಸ್ವರ್ಡಗಳು ಈ ರೀತಿಯಲ್ಲಿ ವಿವಿಧ ಫಿಶಿಂಗ್ ತಾಣಗಳ (Phishing Sites) ಮುಖಾಂತರ ಪಡೆದುಕೊಂಡಿದ್ದಾರೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಪರಿಹಾರ ಹೇಗೆ?
ಅದೇನೆ ಇರಲಿ ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ. ತಮ್ಮ್‌ತಮ್ಮ ಎಲ್ಲ ತಾಣಗಳ ಪಾಸ್ವರ್ಡ ನ್ನು ತಕ್ಷಣವೇ ಬದಲಾಯಿಸಿಕೊಳ್ಳಿ. ಅಲ್ಲದೇ ತಾವು ಬಳಸುತ್ತಿರುವ ಎಲ್ಲ ತಾಣಗಳ ಪಾಸ್ವರ್ಡಗಳು ಬೇರೆ ಬೇರೆಯದಾಗಿರಿಸಿಕೊಳ್ಳುವುದು ಉತ್ತಮ. ಅಂದರೆ Gmail, Facebook, Twitter & Blogs ಇತ್ಯಾದಿ ಎಲ್ಲ ತಾಣಗಳ ಪಾಸ್ವರ್ಡಗಳು ಪ್ರತ್ಯೇಕವಾಗಿರಿಸುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ. ೧೫ ದಿನಕ್ಕೊಮ್ಮೆಯಾದರೂ ಪಾಸ್ವರ್ಡಗಳನ್ನು ಬದಲಾಯಿಸಿ.
ಇವೆಲ್ಲವೂ ಸರಳವಾಗಿ ಸುರಕ್ಷತೆ ಪಡೆಯುವ ಸರಳ ಮಾರ್ಗ.

– ಅಜಯ ಭಟ್