ಇದೆಂತಾ ಸಾವು ಮಾರ್ರೇ..!!

by

ಇದೆಂತಾ ಸಾವು ಮಾರ್ರೇ..!!

ಮಿಡ್ ನೈಟ್ ಅಲ್ಲಿ ಟ್ರಿನ್ ಟ್ರಿನ್ ಅಂತ ನನ್ ಮೊಬೈಲು ಒಂದೇ ಸಮನೆ ನೆನ್ನೆ ರಾತ್ರಿ..ಅದ್ಯಾವ್ದೋ ಸೈಬಿರಿಯನ್ ದೆವ್ವ ಮೆಟ್ಕೊಂಡಿದ್ದ ತರ ಕೂಗೋಕೆ ಸ್ಟಾರ್ಟ್ ಮಾಡ್ತು..!!
“ಏನೋ ಅಧ್ಬುತ ಕನಸು ಕಾಣ್ತಾ ಮಲಗಿರಬೇಕಾದ್ರೆ ಇದೊಂದು ಹೆಂಡತಿ ತರ ನಂಗೆ ಈಗಲೇ ಗಂಟು ಬಿದ್ದಿದೆ ಕಾಟ ಕೊಡಕ್ಕೆ.. ಯಾವನಪ್ಪಾ ಗುಬಾಳ್ ಫೋನ್ ಮಾಡಿರೋನು” ಅಂತ ಗೊಣಗುತ್ತಾ  ನೋಡಿದ್ರೆ ನಮ್ಮ ಹಳೇ ಹುಡ್ಗ..
ಚಡ್ಡಿ ಹಾಕೊಳೋಕು ಮೊದ್ಲೇ ಇದ್ದ ದೋಸ್ತು, ಅಮೇರಿಕದಿಂದ ಕಾಲ್ ಹಾಕಿದ್ದ..!!
” ಏನೋ ಶಿಷ್ಯ ತುಂಬಾ ದಿನ ಆದ್ಮೇಲೆ ನೆನಪಾದ್ನಾ” ಅಂತ ಮಾತು ಆರಂಭಿಸಿದೆ..,
ಅವನಂದಾ..” ಮಗಾ ನಂಗೆ ಇಲ್ಲಿ  ಎಂಗ್-ಏಜು-ಮೆಂಟು ಆಗಿದೆ..ಇಲ್ಲೇ ಅಮೇರಿಕಾದ ಹುಡುಗಿ.. ಮುಂದಿನ ತಿಂಗಳೇ ಮದುವೆ.., ಅದ್ಕೆ ಎಲ್ರಿಗೂ ಹೇಳ್ತಾ ಇದೀನಿ.. ಆಮೇಲೆ ಒಂದು ಮಾತು ಹೇಳಿಲ್ಲ ಅಂತ ಬೈಕೊಬೇಡ್ರೋ.. ಫೋಟಾನ ಫೇಸ್ ಬುಕ್ ಅಲ್ಲಿ ಹಾಕ್ತೀನಿ ನೋಡ್ಕೊಳಿ ” ಅಂದ ಬಡ್ಡಿ ಹೈದ..!!
ನಾನ್ ಫುಲ್ ಶಾಕು , ಮಗಾ ನಮ್ಕಿಂತ ಮೊದ್ಲೇ ಹಾಳಗ್ತಾ ಇದಾನಲ್ಲ ಅಂತ ” ಲೇಯ್ ಓದೋಕೆ ಅಂತ ಹೋಗಿ ಅಲ್ಲೇ ಹುಡುಗಿನೂ ಪಟಾಯ್ಸಿದ್ಯ? ಹೆಂಗೋ ಮಗ ? ಏನೋ ಅವಳ ಹೆಸರು ? ” ಅಂತ ಕೇಳಿದೆ..
“ಕೆಂಪವ್ವ” ಅಂದ ನಾಚಿಕೆಯಿಂದ..!!
” ಲೋ ನಮ್ ಮಂಡ್ಯ ಕಡೆ ಹುಡ್ಗಿನ ಅಮೇರಿಕ ಹುಡುಗಿ ಅಂತ ಇದಿಯೇನೋ ಲೋಫ್ಹರ್ ? ” ಅಂತ ಅವಾಜ್ ಹಾಕಿದ್ದಕ್ಕೆ
” ಥೂ ಕೆಂಪವ್ವ ಅಲ್ವೋ ಕೆಂಪ್ ವಾ ( kemp waugh ) ಅಂತ ಅವಳ ಹೆಸರು ” ಅಂದ ಸ್ಪೆಲ್ಲಿಂಗು ಸೇರ್ಸಿ..!!
ಅಮೇರಿಕ ಕಡೆ ಅಲ್ಲೆಲ್ಲೋ ಮುದ್ದಿನ ಪಾರ್ಟಿ (cuddles party) ಅಂತ ಮಾಡ್ತಾರಂತೆ.. ಅಂದ್ರೆ ಸುಮ್ನೆ ಗುರುತು ಪರಿಚಯ ಇಲ್ದೆ ಇರೋ ಅಪರಿಚಿತರು ಫೇಸ್ ಬುಕ್ ಗೆಳೆಯರು ಹೀಗೆ ಯಾರ್ಯಾರೋ ಅಂದಿನ ದಿನ ಒಂದ್ಕಡೆ ಸೇರ್ಕಂಡು ಪರಿಚಯ ಮಾಡ್ಕಂಡು, ತಬ್ಬಿಕೊಂಡು, ಅಪ್ಪಿಕೊಂಡು, ಮುದ್ದಾಡಿ…………..

ಅಷ್ಟೇ..!! (ಅದನ್ನ ಬಿಟ್ಟು ಬೇರೆಯದರ ಬಗ್ಗೆ ನನಗೆ ಮಾಹಿತಿ ಇಲ್ಲ )

ಆ ಮುದ್ದಿನ ಪಾರ್ಟಿ ಅಲ್ಲೇ ನಮ್ ಕೆಂಪವ್ವ ಸಾರಿ ಕೆಂಪ್ ವಾ ನಮ್ ಹುಡ್ಗಂಗೆ ಸಿಕ್ಕಿದ್ದಂತೆ..!! ಇಷ್ಟು ಹೇಳಿ ನನ್ ತಲೇಲಿ ಹುಳ ಬಿಟ್ಟು ಇನ್ನು ಇರೋ ಬರೋ ನಮ್ ಬೇರೆ ಹುಡುಗರಿಗೆಲ್ಲ ನಿದ್ದೆ ಹಾಳು ಮಾಡಕ್ಕೆ ಸ್ಕೆಚ್ ಹಾಕ್ಕೊಂಡು ಫೋನ್ ಕುಕ್ಕಿದ…!!
ಬೆಳಿಗ್ಗೆ ಅಡ್ಡಾ ದಲ್ಲಿ ಸಿಕ್ಕಿದ ಎಲ್ಲ ಹುಡ್ರು ಇವನ ಬಗ್ಗೆನೇ ಯೋಚಿಸ್ತಾ ನಾವು ಆ ತರ ಏನಾರ ಮಾಡ್ಬೇಕು ನಮಗೂ ಯಾರಾದ್ರೂ ಸಿಕ್ತಾರೆನೋ ಅಂತ ಪ್ಲಾನು ಮಾಡ್ತಾ ಇದ್ರೆ , ನಮ್ ದೇಶದ ಹುಡ್ಗೀರು ಅಮೇರಿಕ ಹುಡುಗಿಯರಿಗಿಂತ ಬಹಳ ಮುಂದಿದ್ದಾರೆ.. ಅವೆಲ್ಲ ಇಲ್ಲಿ ನಡೆಯೋಲ್ಲ ಅನ್ನೋ ತೀರ್ಮಾನದೊಂದಿಗೆ ಅಡ್ಡ ಕ್ಲೋಸ್ ಮಾಡಿದ್ವಿ..!!

 

– ಫ್ಲಾಪೀ ಬಾಯ್’

(This article copied from a blog and posted here by Floppy Boy. This article is not originally shared in Sirsi.Info)