ಮರೆತು ಹೋದ ಮಹಾ ಸಾಮ್ರಾಜ್ಯ: ಹಂಪಿ

by

ಮರೆತು ಹೋದ ಮಹಾ ಸಾಮ್ರಾಜ್ಯ: ಹಂಪಿ

ಹೇಮಕೂಟ, ಮಾತಂಗ, ಋಷ್ಯಶೃಂಗ, ಮಾಲವಂತ ಮೊದಲಾದ ಪರ್ವತಗಳ ನಡುವೆ ಭವ್ಯವಾಗಿ ನಿಂತಿರೊ ಹಂಪಿಯನ್ನು ನೋಡಿದ್ರೆ ಆಹಾ! ಅಧ್ಭುತ! ಅಂತಾ ಅನ್ನಿಸದೇ ಇರದು. ಭೀಮದ್ವಾರ, ಯೋಧದ್ವಾರ, ತಾಂಬೂಲದ್ವಾರ ಯಾವುದರಿಂದ ಒಳಹೊಕ್ಕಲಿ ಎಂದು ತಲೆಕೆಡಿಸಿಕೊಳ್ಳುವ ಪ್ರಮೇಯವೇ ಇಲ್ಲ, ಯಾವ ಕಡೆಯಿಂದ ನೋಡಿದರೂ ಹಂಪಿ ಹಂಪಿಯೇ…

ಹಂಪಿ! ಯಾರಿಗೆ ತಾನೇ ಗೊತ್ತಿಲ್ಲಾ? ವಿಜಯನಗರದ ರಾಜಧಾನಿಯಾಗಿದ್ದ ಇದು ಪುರಾತನ ಪಂಪಾಪತಿಯ ಕ್ಷೇತ್ರವಾಗಿತ್ತು. ಹಂಪಿ ಬಳ್ಳಾರಿಯ ಹೊಸಪೇಟೆಯಿಂದ ೧೨ ಮೈಲಿ ದೂರದಲ್ಲಿದೆ. ಕನ್ನಡ ನಾಡು ಅಂದಾಗ ನೆನಪಾಗುವ ತಾಣ ಹಂಪಿಯಲ್ಲದೇ ಮತ್ಯಾವುದು?

ಮೊದಲೆಲ್ಲಾ ಬಂಗಾರವನ್ನು ಹಾದಿ ಬದಿಯಲ್ಲಿ ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ. ಶಿಲ್ಪಕಲೆಯ ನಾಡಾಗಿದ್ದ ಹಂಪಿ ಬರೀ ಇತಿಹಾಸದ ಕೃತಿಗಳಲ್ಲಿ ಮಾತ್ರ ಕಾಣುತ್ತಿತ್ತು! ಮರೆತು ಹೋದ ಮಹಾ ಸಾಮ್ರಾಜ್ಯದ ಪುನರ್ ಆವಿಷ್ಕಾರ ಮಾಡಲು ಬ್ರಿಟೀಷರೇ ಬರಬೇಕಾಯ್ತು ಅಂದರೆ ನಮ್ಮವರ ದೃಷ್ಟಿದೋಷ ವಿಡಂಬನೀಯವೇ ಸರಿ.

ಕೃಷ್ಣದೇವರಾಯನ ನಂತರ ವಿಜಯನಗರ ಸಾಮ್ರಾಜ್ಯ ದುರ್ಭಲವಾಯಿತು. ಮೊಘಲರ ಆಳ್ವಿಕೆಗೆ ಒಳಪಟ್ಟ ಹಂಪಿ, ದೇವಾಲಯಗಳ ನಾಡು ಎಂಬ ತನ್ನ ಹಿರಿಮೆಯೇ ತನಗಿಟ್ಟ ಶಾಪವೇನೋ ಎಂಬಂತೆ ನಾಷವಾಯಿತು. ಮೊಘಲರ ಕಾಕದೃಷ್ಟಿಗೆ ಒಳಗಾಗಿ ಪುರಾತನ ದೇವಾಲಯಗಳ ಅಧಃಪತನವಾಯಿತು. ಮುಂದೆ ಮೊಘಲರ ಕಾಲ ಮುಗಿಯೋ ಹೊತ್ತಿಗೆಲ್ಲಾ ಹಂಪಿ ಸರ್ವನಾಷವಾಗಿತ್ತು.

ಮುಂದೆ ಬ್ರಿಟೀಷರು ಹಂಪಿಯ ಅನ್ವೇಷಣೆ ಮಾಡುವ ಹೊತ್ತಿಗೆ ಹಂಪಿಯೆಂಬ ನಗರ ಇತ್ತೆಂಬ ವಿಷಯವೇ ಯಾರಿಗೂ ನೆನಪಿರಲಿಲ್ಲ! ಆಕ್ರಮಣಕ್ಕೆ ಒಳಗಾಗಿ ಜೀರ್ಣಾವಸ್ತೆಯಲ್ಲಿ ಉಳಿದಷ್ಟೇ ದೇವಾಲಯಗಳು ವಿಜಯನಗರದ ಶಿಲ್ಪಶ್ರೀಮಂತಿಕೆಗೆ ಸಾಕ್ಷ್ಯವಾಗಿವೆ. ಹಂಪಿಯ ಸಂಗೀತ ನುಡಿಸೋ ಕಂಬಗಳಂತೂ ವಿಶ್ವದ ಮತ್ಯಾವುದೇ ದೇವಾಲಯಗಳಲ್ಲೋ, ಮತ್ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಣಲು ಸಾಧ್ಯವೇ ಇಲ್ಲ.

ಗತವೈಭವವನ್ನು ಕಳೆದುಕೊಂಡ ವಿರೂಪಾಕ್ಷ ದೇವಾಲಯ, ಹಜಾರರಾಮ ದೇವಾಲಯ, ವಿಜಯವಿಠಲ ದೇವಾಲಯಗಳಂತ ಅಧ್ಬುತ ಕಲಾಕೃತಿಗಳ ತಮ್ಮ ಆಕೃಂದನವನ್ನು ತಮ್ಮ ಸೌಂದರ‍್ಯದಲ್ಲಿ ಅಡಗಿಸಿಟ್ಟುಕೊಂಡು ಪ್ರವಾಸಿಗರ ನಗುವಿಗೆ ಕಾರಣವಾಗಿವೆ. ಯಾವೊಬ್ಬ ಗೈಡ್ ಕೂಡ ಹಂಪಿಯ ಇತಿಹಾಸವನ್ನು ವಿವರಿಸದೇ ಕೇವಲ ಸ್ಥಳ ಸೌಂದರ‍್ಯವನ್ನಷ್ಟೇ ಹೊಗಳುತ್ತಾನೆ! ಇದು ನಮ್ಮ ಸರ್ಕಾರಗಳ ನಿರ್ಲಕ್ಞಷ ಧೋರಣೆಗೆ ಹಿಡಿದ ಕೈಗನ್ನಡಿ ಅಂದರೂ ತಪ್ಪಲ್ಲ.

 

 

– ಮೋನಿಕಾ ವಾಝ್