ಜೋಗಿ ರಿಮಿಕ್ಸ್

by

ಬೇಡುವೆನು ಬೀಡಿಯನು
ಕೊಡಿಸ್ರಪ್ಪ ವಿಸ್ಕಿಯನು
ಟೈಟಾದ್ರೆ ಬಯ್ಬೇಡಿ ರೇಗಿ
ನಾನೊಬ್ಬ ಥರ್ಡ್ ಕ್ಲಾಸು ರೋಗಿ
ನಾನೊಬ್ಬ ಥರ್ಡ್ ಕ್ಲಾಸು ರೋಗಿ…
ಹೊಸಾ ಬ್ಯೂಟಿಯಾ ನೋಡೋ ಆಸೆಯಾ
ಹೊತ್ತು ದಿನವೂ ಫೇಸ್ ಬುಕ್ಕಿಗ್ ಹೋಗ್ತೀನೋ
ಹಳೆ ಹುಡುಗಿಯಾ ನೋವು ಮರೆಸೆಯಾ
ಎಂದು ಕುಡಿದು ಬಾರೊಳಗೆ ಮಲಗ್ತೀನೋjogi-remix

ಅವಳೊಬ್ಳೆಯೇನು? ಸ್ಟೆಪ್ನಿ ಇಲ್ಲವೇನು?
ಅವಳೊಬ್ಳೆಯೇನು? ಸ್ಟೆಪ್ನಿ ಇಲ್ಲವೇನು?
ಚಡ್ಡಿ ಫಿಗರ್ಸು ಕಾಣ್ತಿಲ್ಲ ನೋಡು..

ಮೋರೀಲ್ ಬಿದ್ದರೂ ಯಾರ್ನಿಂಗ್ ಎದ್ದರೂ
ಮನೆಕಡೆಗೆ ಹೋಗೋದ ಮರೆಯೊಲ್ಲ
ಏಡ್ಸೇ ಬಂದರೂ ಪ್ರಾಣ ಹೋದರೂ
ನನ್ನಾ ಕೆರೆತಕ್ಕೆಂದೆಂದೂ ಕೊನೆಯಿಲ್ಲ

ಕುಡ್ದಿದ್ದು ಎಲ್ಲಾ ವಾಂತಿಯಾಯಿತಲ್ಲ
ತಿಂದಿದ್ದು ಎಲ್ಲಾ ಭೇದಿಯಾಯಿತಲ್ಲ
ಕೇಳ್ರಪ್ಪಾ ನನ್ನ ಗೋಳನು..

ಬೇಡುವೆನು ಬೀಡಿಯನು
ಕೊಡಿಸ್ರಪ್ಪ ವಿಸ್ಕಿಯನು
ಟೈಟಾದ್ರೆ ಬಯ್ಬೇಡಿ ರೇಗಿ
ನಾನೊಬ್ಬ ಥರ್ಡ್ ಕ್ಲಾಸು ರೋಗಿ

-ವಿನಾಯಕ ಭಟ್