Power Kannada Movie

by

ಪವರ್ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಪವರ್ ನ ಖದರ್ ನೋಡೋ ಭಾಗ್ಯವಂತೂ ಖಂಡಿತಾ ಸಿಗತ್ತೆ. ಪುನೀತ್ ಮತ್ತೆ ತಮ್ಮ ಲಯಕ್ಕೆ ಮರಳಿದ್ದಾರೆ.
ಅವರ ನಟನೆಯಲ್ಲಿ ಪವರ್ ತುಂಬಿಕೊಂಡಿದೆ. ಮತ್ತೊಂದು ವಿಶೇಷವೆಂದರೆ ಡಾನ್ಸ್ ನಲ್ಲಿ ಇದುವರೆಗೆ ಕಾಣದ ಪುನೀತ್ ಕಾಣಸಿಗುತ್ತಾರೆ.
ಯಾಕೆಂದರೆ ಪ್ರೇಕ್ಷಕರ ಬಾಯಿಂದ ಉದ್ಘಾರ ಹೊರಹುಮ್ಮುವಂತ ಛಾಲೆಂಜಿಂಗ್ ಸ್ಟೆಪ್ ಗಳನ್ನು ಹಾಕಿದ್ದಾರೆ. ಚಿತ್ರದ ಹಾಡುಗಳು ಚೆನ್ನಾಗಿವೆ, ನ್ಯತ್ಯ ನಿರ್ದೇಶನ ಸಂಚಲನ ಮೂಡಿಸುವಂತಿದೆ.

ಕನ್ನಡದಲ್ಲಿ ಮೊದಲಬಾರಿ ನಟಿಸುತ್ತಿರುವ ತ್ರಿಷಾ ಪಾತ್ರ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಿದ್ದರೂ ಇರುವಷ್ಟು ಸಮಯ ಮೋಹಕತೆಯಲ್ಲಿ ಗಮನ ಸೆಳೆಯುತ್ತದೆ. ಮಧ್ಯಂತರದ ನಂತರ ಕಥೆಯನ್ನು ಎಳೆದಿರುವುದು ಸ್ವಲ್ಪ ಬೋರ್ ಅನಿಸುವುದಾದರೂ ಹಾಸ್ಯ ದಿಗ್ಗಜರಾದ ರಂಗಾಯಣ ರಘು, ಸಾಧು ಕೋಕಿಲ ಅವರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ರಿಮೇಕ್ ಆದರೂ ಮೂಲ ಚಿತ್ರದ ಅದ್ಧೂರಿತನದಲ್ಲೇ ‘ಪವರ್’ ನಿರ್ಮಾಣವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಚಿತ್ರದ ಜೀವಾಳ.

14 ವರ್ಷಗಳ ನಂತರ ಕೋಮಾದಿಂದ ಬಂದ ಅಪ್ಪನನ್ನು ಉಳಿಸಿಕೊಳ್ಳಲು ಪುನೀತ್ ರಿಯಾಲಿಟಿ ಶೋವನ್ನೇ ನಿರ್ಮಿಸಿಬಿಡುತ್ತಾನೆ.
ಸ್ಪೇನ್ ಗೆ ಹೋದಾಗ ಸಿಕ್ಕ ಪ್ರಶಾಂತಿ (ತ್ರಿಷಾ) ಜೊತೆ ಭರತ್ (ಪುನೀತ್) ಗೆ ಲವ್ವಾಗುತ್ತದೆ.
ಮುಂದೇನೇನಾಗುತ್ತದೆ ಎಂಬುದನ್ನ ಚಿತ್ರಮಂದರಕ್ಕೇ ಹೋಗಿ ನೋಡಿ. ಇದು ಪಕ್ಕಾ ಫ್ಯಾಮಿಲಿ ಸಿನಿಮಾವಾಗಿದ್ದು ಪೈಸಾ ವಸೂಲ್ ಗ್ಯಾರಂಟಿ.

power-movie-2 power-movie-3

-ವಿನಾಯಕ ಭಟ್