Sirsi.Info ಪ್ರಸ್ತುತ ಪಡಿಸುವ S-FM Online FM

by

ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ಹಾಗೂ ಏಕೈಕ ಎಪ್.ಎಂ. Sirsi.Info ಪ್ರಸ್ತುತ ಪಡಿಸುವ S-FM ಈಗ ನೇರಪ್ರಸಾರ ಕಾಣುತ್ತಲಿದೆ.

Sirsi.Info ಪ್ರಸ್ತುತ ಪಡಿಸುವ S-FM ನ್ನು ಸಾರ್ವಜನಿಕವಾಗಿ ಬಿತ್ತರಿಸಲಾಗಿದೆ. ತಾವು S-FM ನ್ನು Android Play Store ನಲ್ಲಿ Download ಮಾಡಿ ಕೇಳಬಹುದಾಗಿದೆ.

ಏನಿದು S-FM?
ಅಂತರ್ಜಾಲಾಧಾರಿತ ನೇರಪ್ರಸಾರ ಕಾಣುತ್ತಲಿರುವ ಎಪ್.ಎಂ. ಚ್ಯಾನೆಲ್ ಆಗಿದ್ದು, ಸಾರ್ವಜನಿಕರು Sirsi.Info Android App ನ್ನು ಡೌನ್ಲೋಡ್ ಮಾಡುವ ಮುಖಾಂತರ ಬಳಸಬಹುದಾಗಿದೆ. ನಿರಂತರ ಪ್ರಸಾರ ಕಾಣಲಿರುವ ಒಂದು ಪರಿಪೂರ್ಣ ಎಪ್.ಎಂ. ಸೇವೆ ಇದಾಗಲಿದೆ. ಎಸ್.ಎಪ್.ಎಂ. ಸಂಪೂರ್ಣ ಉಚಿತವಾಗಿದ್ದು, ಜಗತ್ತಿನಾದ್ಯಂತ ಪ್ರಸಾರ ಕಾಣಲಿದೆ.

 

ಏನಿದರ ವಿಶೇಷತೆ?
S-FM ಅಂತರ್ಜಾಲಾಧಾರಿತವಾಗಿರುವದರಿಂದ ಜಗತ್ತಿನಾಧ್ಯಂತ ಎಲ್ಲರೂ ಸುಲಲಿತವಾಗಿ ಬಳಸಬಹುದಾಗಿದೆ. ಇದಕ್ಕೆ ಯಾವದೇ ಅಡೆತಡೆಯಿಲ್ಲ. ೧೨ ಘಂಟೆಗಳ ನಿರಂತರ ಪ್ರಸಾರಗೊಳ್ಳುವ ಎಪ್.ಎಂ. ತಮ್ಮ ಸರ್ವ ಅಭಿಲಾಶೆಯನ್ನೂ ಪರಿಪೂರ್ಣಗೊಳ್ಳುವ ಸಾಮರ್ಥ್ಯ ಹೊಂದಿದೆ.

ಶಿರಸಿಯಿಂದ ನೇರಪ್ರಸಾರ
ಶಿರಸಿಯಿಂದಲೇ ತನ್ನ ಕಾರ್ಯಚಟುವಟಿಕೆಯನ್ನು ಬಿತ್ತರಿಸುವ ಸಾಮರ್ಥ್ಯ ಹೊಂದಿರುವ ಎಸ್.ಎಪ್.ಎಂ, ತಂತ್ರಜ್ನಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾನು ಯಶಸ್ವೀಯಾಗಿದ್ದೇನೆ.
ಸರ್ವತಂತ್ರ ಸ್ವತಂತ್ರ ಸೇವಾ ವ್ಯವಸ್ಥೆಯನ್ನು ಹೊಂದಿದ್ದು, ಯಾರದೇ ಅನುಜ್ನೆಗೆ ಒಳಪಟ್ಟುದುದಲ್ಲ.
ಅತ್ಯಂತ ಕಡಿಮೆ ಡೇಟಾವನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಬಿತ್ತರಿಸುವ ಸಾಮರ್ಥ್ಯ ಹೊಂದಿದೆ.

ಏನೇನಿದೆ S-FM ನಲ್ಲಿ?
ಈ ಪ್ರಶ್ನೆ ಸರ್ವೇ ಸಾಮಾನ್ಯವಾಗಿ ಎಲ್ಲರೂ ನನ್ನನ್ನು ಕೇಳುವುದುಂಟು. ನಿಮಗೆ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಇದು ಹೀಗೇ ಇಷ್ಟೇ ಎಂದು ಎಂದಿಗೂ ನಿರ್ಭಂದಿಸಿದಂತಹ ಕಾರ್ಯನಿರ್ವಹಣಾ ಮನೋಭಾವ ನನ್ನದಲ್ಲ. ಉತ್ತಮವಾದ ಎಲ್ಲವನ್ನು ಸ್ವೀಕರಿಸಿ ಬಿತ್ತರಿಸುವ ವಿಶಾಲ ಮನೋಭಾವ ಹೊಂದಿದ್ದು, ಪ್ರತಿಭೆಗೆ ಪ್ರೋತ್ಸಾಹ ನೀಡುವಂತಹ ಎಲ್ಲವನ್ನು ಬಿತ್ತರಿಸುವ ಅಭಿಲಾಶೆಯೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೂ ಪ್ರಾಥಮಿಕ ಹಂತವಾಗಿ ಕೆಲವು ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ.
ದಿನನಿತ್ಯದ ಆಗುಹೋಗುಗಳ ಸುದ್ದಿ ಸಮಾಚಾರಗಳು, ಹಾಡು-ಸಂಗೀತ, ಯುವ ಪೀಳಿಗೆಗೆ ಯಶಸ್ವೀ ಮಾರ್ಗೋಪಾಯಗಳ ಸವಿವರಣೆ, ಹೆಂಗಳೆಯರಿಂದ ಹೆಂಗಳೆಯರಿಗಾಗಿ ಮನೆ ಪಾಕ, ಕೃಷಿಕರಿಗಾಗಿ ಕೃಷಿ ಮಾಹಿತಿ, ತಂತ್ರಜ್ನಾನದ ಸ್ಥಿತಿಗತಿಗಳ ವಿವರಣೆ, ಸದ್ವಿಚಾರಗಳ ಸಮಾಲೋಚನೆ, ಯುವ ಪ್ರತಿಭೆಗಳ ಅನಾವರಣ, ಉಪಯುಕ್ತ ಮಾಹಿತಿ, ಹಿನ್ನೆಲೆ ಸಂಗೀತ, ಯಕ್ಷ ರಸೀಕರಿಗಾಗಿ ಯಕ್ಷಗಾನ ಹಾಗೂ ಇನ್ನೂ ಸಾಕಷ್ಟು ಕಾರ್ಯಕ್ರಮಗಳು ಮೂಡಿಬರಲಿದೆ. ಈಗಾಗಲೇ ಹೇಳಿದಂತೆ ಇದು ಕೇವಲ ಪ್ರಾರಂಭಿಕ ಹಂತವಾದುದರಿಂದ ಇನ್ನೂ ಸಾಕಷ್ಟು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಕೇಳಬಹುದಾಗಿದೆ.

ಏನಿದರ ಅಗತ್ಯ?
Sirsi.Info ಪ್ರಸ್ತುತ ಪಡಿಸುವ S-FM ಇಂದಿನ ತಂತ್ರಜ್ನಾನ ಹಾಗೂ ಸಮಯದ ಬೇಡಿಕೆಯಂತೆ ನಿರ್ಮಾಣಪಡಿಸಲಾದ ನವೀನ ಎಪ್.ಎಂ. ಇದು ಜಗತ್ತಿನಾದ್ಯಂತ ಬಿತ್ತರಗೊಳ್ಳುವದರಿಂದ ಯುವ ಪ್ರತಿಭೆಗಳಿಗೆ ಅಂತರಾಷ್ಟ್ರೀಯ ವೇದಿಕೆ ಒದಗಿಸುವ ಪ್ರಮುಖ ಕಾರಣಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆ ಅದರಲ್ಲಿಯೂ ಶಿರಸಿ ಮಹಾನಗರಗಳಂತೆ ಎಲ್ಲ ಸಾಮರ್ಥ್ಯಗಳನ್ನು ಒಳಗೊಂಡಿದ್ದು, ನಾವೂ ತಂತ್ರಜ್ನಾನವನ್ನು ಸಮರ್ಥವಾಗಿ ಬಳಸುವ ಸಾಮರ್ಥ್ಯ ಹೊಂದಿದ್ದೇವೆ ಎನ್ನುವದನ್ನು ವಿವರಿಸುವ ಪರಿಯೂ ಹೌದು. Android Mobile ಗಳು ಬಹು ಬಳಕೆಯಲ್ಲಿರುವದರಿಂದ, ತಮ್ಮ ಮೊಬೈಲ್ನಲ್ಲಿ ಯಾವದೇ ಅಡೆತಡೆಯಿಲ್ಲದೇ ಕೇಳಬಹುದಾದ ವಾತಾವರಣ ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳು ಮೂಡಿಬರುವದರಿಂದ ಇದೊಂದು ವಿಶಿಷ್ಟ ಎಪ್.ಎಂ. ಆಗಲಿದೆ. ಅಂತರ್ಜಾಲಾಧಾರಿತವಾದುದರಿಂದ ಯಾರು ಎಲ್ಲಿಂದ ಬೇಕಾದರೂ ಬಳಸಬಹುದಾಗಿದೆ.

ಬಳಕೆ ಹೇಗೆ?
S-FM Sirsi.Info Android App ನಲ್ಲಿ ಅಂತರ್ಗತವಾಗಿದೆ. Android Play Store ನಲ್ಲಿ ಲಭ್ಯವಿದ್ದು, Download ಮಾಡಿಕೊಂಡು ಬಳಸಬಹುದಾಗಿದೆ. ಇದು ಸಧ್ಯ ಕೇವಲ Android ನಲ್ಲಿ ಮಾತ್ರವೇ ಲಭ್ಯವಿದ್ದು ಬೇರೆಲ್ಲಿಯೂ ಬಳಸಲು ಸಾಧ್ಯವಿರುವದಿಲ್ಲ.

ಪ್ರಸಾರ ಸಮಯ
ಬೆಳಿಗ್ಗೆ ೧೦ ಘಂಟೆಯಿಂದ ರಾತ್ರಿ ೧೦ ಘಂಟೆಯವರೆಗೆ ನಿರಂತರ ಪ್ರಸಾರ.

ನೀವು ವಿಷಯ ವಿನಮಯ ಮಾಡಬಹುದು.
ತಮ್ಮ ಪ್ರತಿಭೆಯನ್ನು S-FM ನಲ್ಲಿ ಬಿತ್ತರಿಸಬಹುದು. ನೀವು ಮಾಡಬೇಕಾಗಿರುವದಿಷ್ಟೇ, ನಿಮ್ಮ ಮೊಬೈಲ್ನಲ್ಲಿ ನಿಮ್ಮದೇ ದ್ವನಿಯಲ್ಲಿ ದ್ವನಿ ಮುದ್ರಿಸಿ ನಮಗೆ ಇ-ಮೇಲ್ ಮಾಡಬಹುದಾಗಿದೆ.
ಇ-ಮೇಲ್ ವಿಳಾಸ email@sirsi.info. ಪೂರ್ಣ ಹೆಸರು, ಊರು, ವಿಷಯದ ತಲೆಬರಹಗಳನ್ನು ದ್ವನಿಮುದ್ರಿಸಿ ಕಳುಹಿಸಿ.

ಕೊನೆಯ ಮಾತು
ದ್ವನಿ ಮುದ್ರಿಸಿ ಬಿತ್ತರಿಸುವಲ್ಲಿ ಸಾಕಷ್ಟು ಅನುಭವೀ ಹಾಗೂ ಆತ್ಮೀಯ ಗೆಳೆಯ ಗೆಳತಿಯರು ತಮ್ಮ ಕೊಡುಗೆಯನ್ನು ಎಪ್.ಎಂ. ಗೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ವಿನೂತನ ಪ್ರಯತ್ನಕ್ಕೆ ತಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಸಹಕಾರ ಸದಾ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ. ತಮ್ಮ ಅಭಿಪ್ರಾಯಗಳಿಗೆ ಮುಕ್ತ ಅವಕಾಶವಿದ್ದು, ಋಣಾತ್ಮಕ ಹಾಗೂ ಧನಾತ್ಮಕ ಅಭಿಪ್ರಾಯಗಳನ್ನು ಸರೀ ಸಮನಾಗಿ ಸ್ವೀಕರಿಸುವ ಮನೋಭಾವ ಹೊಂದಿದ್ದೇನೆ. ಹಾಗಾಗಿ ತಮ್ಮ ಅಭಿಪ್ರಾಯವನ್ನು ದ್ವನಿ ಮುದ್ರಿಸಿ ಇ-ಮೇಲ್ ಕಳುಹಿಸಿ.

S-FM ಕೊಂಡಿ ಈ ಕೆಳಗಿದ್ದು, ಮೊಬೈಲ್ ನಲ್ಲಿ ಸ್ಥಾಪಿಸಲು ಕೊಂಡಿ ಬಳಸಿ.

ಎಲ್ಲರಿಗೂ ಧನ್ಯವಾದಗಳು

Download S-FM