ಉತ್ತರ ಕನ್ನಡದ ಮೆರಗು ಉಂಚಳ್ಳಿ ಜಲಪಾತದ ಸೊಬಗು

by

ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನ ಹತ್ತಿರವಿರುವ ಉಂಚಳ್ಳಿ ಜಲಪಾತ ನೋಡಲು ಮನಮೋಹಕವಾದುದು. ಶಿರಸಿಯಿಂದ ಕೇವಲ 38.2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದ ಆಕರ್ಷಣೆಗೊಳಪಟ್ಟು ದೇಶದ ಮೂಲೆಮೂಲೆಯಿಂದ ಜನರು ಬರುತ್ತಾರೆ. 116 ಮೀಟರ್ ಎತ್ತರದಿಂದ ದುಮ್ಮಿಕ್ಕುವ ಈ ಜಲಪಾತ, ಜನರನ್ನು ಮಂತ್ರಮುಗ್ದಗೊಳಿಸುತ್ತದೆ.

1845 ರಲ್ಲಿ ಬ್ರಿಟಿಷ್ ಸರ್ಕಾರದ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ. ಡಿ. ಲುಷಿಂಗ್ಟನ್ ಅವರು ಕಂಡುಹಿಡಿದ ಜಲಪಾತವಿದು. ಸಿದ್ದಾಪುರ ತಾಲೂಕಿಗೆ ಒಳಪಡುವ ಹೆಗ್ಗರಣಿ ಸಮೀಪದಲ್ಲಿರುವ ಮನಸೂರೆಗೊಳ್ಳುವ ಉಂಚಳ್ಳಿ ಜಲಪಾತವಿದು. ಕೆಪ್ಪ ಜೋಗ ಎಂಬ ಅನ್ವರ್ಥಕ ನಾಮವನ್ನು ಪಡೆದಿರುವ ಜಲಪಾತ.

ಉತ್ತರ ಕನ್ನಡದಲ್ಲಿ ಮೊಟ್ಟಮೊದಲ ಪ್ರಯತ್ನವಾದ 360 ಡಿಗ್ರಿ ಫೋಟೋಗ್ರಾಫಿಯನ್ನು ಮಾಡಿ ಸಾರ್ವಜನಿಕರಿಗೆ ವಿಹಂಗಮ ದೃಶ್ಯ ವೀಕ್ಷಿಸುವ ಅವಕಾಶವನ್ನು ನೀಡಿದ್ದೇನೆ. ಕುಳಿತಲ್ಲಿಯೇ ಈ ವಿನೂತನ 360 ಡಿಗ್ರಿ ಫೋಟೋ ವೀಕ್ಷಿಸಿ.

ತಮಗಿದು ಇಷ್ಟವಾದಲ್ಲಿ ಎಲ್ಲರೊಂದಿಗೂ ಹಂಚಿಕೊಳ್ಳಿ.

  • ಅಜಯ ಭಟ್ಟ